ಭಾನುವಾರ, ಡಿಸೆಂಬರ್ 11, 2011

ಸರ್ಕಾರಿ ಶಾಲೆಗಳನ್ನು ಮುಚ್ಚಲು ಚಿಂತಿಸುವ ಬದಲು ಉಳಿಸಿ ಉದ್ದರಿಸುವ ಕಾರ್ಯಕ್ಕೆ ಮುಂದಾಗಲಿ


 ಸಿ.ಎನ್.ವೆಂಕಟೇಶ್
ಚನ್ನಪಟ್ಟಣ: ಇತ್ತೀಚೆಗೆ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಎತ್ತೇಚ್ಚವಾಗಿ ಬಡಜನರ, ಕೂಲಿ ಕಾರ್ಮಿಕ ಹಾಗೂ ಮಧ್ಯಮ ವರ್ಗದವರ ಮಕ್ಕಳು ಸುಮಾರು ನೂರಕ್ಕೆ ಎಪ್ಪತ್ತರಷ್ಟು ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಓದುತ್ತಿದ್ದಾರೆ. ಇನ್ನು ಉಳಿದ ಮುವತ್ತರಷ್ಟು ಮಕ್ಕಳು ಪಟ್ಟಣ ಪ್ರದೇಶಗಳಲ್ಲಿ ಓದುತ್ತಿದ್ದಾರೆ ಆದರೆ ಈ ವ್ಯವಸ್ಥೆಯಲ್ಲಿ ೯೦% ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ೧೦% ಮಕ್ಕಳು ಖಾಸಗಿ ಶಾಲೆಗಳಲ್ಲೂ ಓದುತ್ತಿದ್ದು. ಈ ಮಕ್ಕಳಿಗೆ ಸಿಗುವ ಸೌಲಭ್ಯಗಳು ೯೦% ಮಕ್ಕಳಿಗೆ ಸಿಗುತ್ತಿಲ್ಲ.
ಇಂದಿನ ದಿನಗಳಲ್ಲಿ ನಮ್ಮ ಕನ್ನಡ ನಾಡಿನಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಇತಿಹಾಸವೇನಾದರೂ ಉಳಿದಿದ್ದರೆ ಅದು ನಮ್ಮ ಸರ್ಕಾರಿ ಕನ್ನಡ ಶಾಲೆಗಳಿಂದ ಹಾಗೂ ಗ್ರಾಮೀಣ ಪ್ರದೇಶಗಳಿಂದ ಮಾತ್ರ ಇದನ್ನು ಕನ್ನಡ ನಾಡಿನ ಎಲ್ಲಾ ಮನುಕುಲದವರು ಅರಿಯಬೇಕಾಗುತ್ತದೆ. ಹಾಗೆಯೇ ಸರ್ಕಾರ ಶಿಕ್ಷಣ ಇಲಾಖೆಗೆ ನಮ್ಮದೊಂದು ಸಲಹೆ ಏನೆಂದರೆ ನೀವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತಿದೆ ಆದ್ದರಿಂದ ಶಾಲೆಗಳನ್ನು ಮುಚ್ಚಬೇಕ್ಕೆನ್ನುತ್ತೀರಿ ಹಾಗೇ ಮಾಡಿದರೆ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಕಡಿಮೆಯಾಗಿ ಖಾಸಗಿ ಶಾಲೆಗಳು ಹೆಚ್ಚುತ್ತಿರುತ್ತವೆಯೇ ಹೊರತು ಸರ್ಕಾರಿ ಶಾಲೆಗಳು ಉದ್ದಾರ ವಾಗುವುದಿಲ್ಲ ಆದ್ದರಿಂದ ಶಾಲೆಗಳನ್ನು ಮುಚ್ಚಲು ಚಿಂತಿಸುವ ಬದಲು ಉಳಿಸಿ ಉದ್ದರಿಸುವ ಮತ್ತು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನ ಓದಗಿಸುವ ಕಡೆ ಗಮನಹರಿಸಬೇಕು.
ಒಂದು ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಒಂದು ಕೇಂದ್ರೀಯ ಸ್ಥಳವನ್ನು ಗೊತ್ತುಪಡಿಸಿ ಅಲ್ಲಿ ಒಂದು ಕೇಂದ್ರೀಯ ಶಾಲೆಯನ್ನು ತೆರೆಯಬೇಕು ಆ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಬೇಕಾದ ವಾತವರಣ, ಮೂಲಭೂತ ಸೌಕಂiiಗಳನ್ನು ಹಾಗೂ ಕಲಿಕೆಗೆಬೇಕಾದ ಸಕಲ ಸವಲತ್ತುಗಳನ್ನೊಳಗೊಂಡಂತೆ ಎಲ್ಲವೂ ಇರಬೇಕು ಮತ್ತು ಕನಿಷ್ಠ ತರಗತಿಗೊಂದು ಕೊಠಡಿ, ವಿಷಯಕ್ಕೊಬ್ಬರು ಶಿಕ್ಷಕರು, ಪ್ರಯೋಗಾಲಯ, ದೈಹಿಕ ಶಿಕ್ಷಕರು, ತೋಟಾಗಾರಿಕೆ ಶಿಕ್ಷಕರು, ಸಂಗೀತ ಇತರ ಚಟುವಟಿಕೆ ಗಳನ್ನೊಳಗೊಂಡಂತೆ ಇರಬೇಕು. ಹಾಗೆಯೇ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆಯು ಸಹ ಮಕ್ಕಳಿಗೆ ಗುಣಮಟ್ಟದ್ದಾಗಿರಬೇಕು. ಇಷ್ಟೆಲ್ಲಾ ಸೌಲಭ್ಯಗಳನ್ನೊಳಗೊಂಡು ಈ ಶಾಲೆಯು ಸರ್ಕಾರಿ ಕೇಂದ್ರೀಯ ಶಾಲೆ ಎಂದೆ ನಾಮಕರಣಗೊಂಡು ಈ ಶಾಲೆಯಲ್ಲಿ ೫ ರಿಂದ ೧೨ ತರಗತಿಯವರೆಗೂ ಶಿಕ್ಷಣ ನೀಡಬೇಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಎಲ್ಲಾ ಗ್ರಾಮಗಳ ಮಕ್ಕಳುಗಳು ಈ ಕೇಂದ್ರೀಯ ಶಾಲೆಗೆ ಬಂದು ಓದಲು ವಾಹನದ ಸೌಕರ್ಯವನ್ನು ಕಲ್ಪಿಸಬೇಕು, ಅಗತ್ಯವಿದ್ದರೆ ಅತಿ ಕಡು ಮಕ್ಕಳಿಗೆ ಮತ್ತು ಅಂಗವಿಕಲ ಮಕ್ಕಳಿಗೆ ಈ ಕೇಂದ್ರೀಯ ಶಾಲೆಯಲ್ಲಿಯೇ ವಸತಿ ಸೌಕರ್ಯವನ್ನು ಮಾಡಿಕೊಡಬೇಕಾಗುತ್ತದೆ.
ಈ ಕೇಂದ್ರೀಯ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಶಿಕ್ಷಣವು ಕನಿಷ್ಠ ಮೊರಾರ್ಜಿ ಶಾಲೆ ಹಾಗೂ ಆದರ್ಶ ಶಾಲೆಗಳಲ್ಲಿ ನೀಡುತ್ತಿರುವಂತಹ ಶಿಕ್ಷಣವನ್ನಾದರೂ ಕೊಡಬೇಕು ಇನ್ನು ಸ್ವಲ್ಪ ದೊಡ್ಡ ಮನಸ್ಸು ಮಾಡಿದರೆ ಜವಾಹರ್ ನವೋದಯ ಶಾಲೆ ಮಾದರಿಯ ಶಿಕ್ಷಣವನ್ನು ಕೊಟ್ಟರೆ ಕೊನೆಯ ಪಕ್ಷ ನೂರು ಮಕ್ಕಳಲ್ಲಿ ತೊಂಬಂತ್ತು ಮಕ್ಕಳಿಗಾದರು ಮೌಲ್ಯಾಧಾರಿತ ಶಿಕ್ಷಣವನ್ನು ಕೊಡಲು ಸಾಧ್ಯವಾಗುತ್ತದೆ.
ಹಾಗೆಯೇ ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಉದ್ಯೋಗಗಳನ್ನು ಕೊಡಬೇಕು. ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಸೌಲಭ್ಯ ಪಡೆಯುತ್ತಿರುವ ಮಕ್ಕಳು ಹಾಗೂ ಜನಪ್ರತಿ ನಿಧಿಗಳ ಮಕ್ಕಳನ್ನೊಳಗೊಂಡಂತೆ ಎಲ್ಲರೂ ಸಹ ಸರ್ಕಾರಿ ಶಾಲೆ ಯಲ್ಲಿಯೇ ವ್ಯಾಸಂಗ ಮಾಡಬೇಕೆಂಬ ಕಾನೂನನ್ನು ಕಟ್ಟು ನಿಟ್ಟಾಗೆ ತರಬೇಕು.
ಈ ರೀತಿ ಮಾಡಿದಾಗ ಈ ನಾಡಿನಲ್ಲಿರುವ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸಿಗುತ್ತದೆ. ಬಡವ ಶ್ರೀಮಂತರೆಂಬ ಭಾವನೆಯು ಇರುವುದಿಲ್ಲ. ಸರ್ಕಾರವು ಮೊದಲು ಖಾಸಗಿ ಶಾಲೆಗಳಿಗೆ ಪರವಾನಿಗೆ ಕೊಡುವುದನ್ನು ನಿಲ್ಲಿಸಬೇಕು, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಸುಮಾರು ಏಳೆಂಟು ತರಹದ ಶಿಕ್ಷಣ ವ್ಯವಸ್ಥೆ ಇದೆ. ಉದಾಹರಣೆಗೆ ಇಂಟರ್‌ನ್ಯಾಷನಲ್ ಶಾಲೆ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ, ಇಂಗ್ಲೀಷ್ ಮೀಡಿಯಂ ಶಾಲೆಗಳು ಹೀಗೆ ಕೊನೆಯದೆ ಸರ್ಕಾರಿ ಶಾಲೆಗಳಲ್ಲಿ
ಕೊಡುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಮನಗಂಡ ಮಕ್ಕಳ ಪೋಷಕರುಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಮ್ಮ ಮಕ್ಕಳನ್ನು ಖಾಸಗಿ ಹಾಗೂ ಇತರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದ್ದರಿಂದ ಮಕ್ಕಳ ದಾಖಲೆ ವರ್ಷದಿಂದ ವರ್ಷಕ್ಕೆ ಕುಂಟಿತವಾಗುತ್ತಿದೆ, ಸರ್ಕಾರವು ಇದರ ಬಗ್ಗೆ ಚಿಂತಿಸಿ ತಕ್ಷಣ ಪರ್ಯಾಯ ಚಿಂತನೆಯನ್ನು ನಡೆಸದಿದ್ದರೆ ಸರ್ಕಾರಿ ಶಾಲೆಗಳು ಇನ್ನು ಐದು ವರ್ಷಗಳಲ್ಲಿ ಕೇವಲ ಬೆರಳಣಿಕೆಯಷ್ಟು ಮಾತ್ರ ಉಳಿಯತ್ತವೆ.ಖಾಸಗಿ ಶಾಲೆಗಳಂತೂ ಪಾರ್ಥೇನಿಯಂ ಗಿಡದಂತೆ ಎಲ್ಲಿಬೇಕಂದರಲ್ಲಿಯೇ ಸೃಷ್ಟಿಯಾಗುತ್ತವೆ.
ನಮ್ಮ ಕರ್ನಾಟಕ ಸರ್ಕಾರಿ ಕನ್ನಡ ಶಾಲೆಗಳ ಮಕ್ಕಳಿಗೆ ಶ್ರೀಮಂತ ಅಥವಾ ಮೌಲ್ಯಾಧಾರಿತ ಶಿಕ್ಷಣ ಸಿಕ್ಕಿದಾಗ ಮಾತ್ರ ನಮ್ಮ ಕನ್ನಡ ನಾಡು ಶ್ರೀಮಂತ ನಾಡಾಗಿ ಸದಾ ನಗು ನಗುತ್ತಿರಲೂ ಸಾಧ್ಯಾ ಹೇಗೆಂದರೆ ಶಿಕ್ಷಣವೇ ಸರ್ವಾಂತರಯಾಮಿ ಶಿಕ್ಷಣವೇ ಸಕಲ.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...