ಭಾನುವಾರ, ಏಪ್ರಿಲ್ 29, 2012

ನಟರೊಳಗಿನ ಜಗತ್ತು


                                    ಬೇಲಿಯೊಳಗಣ ಬದುಕು….
 ಭಯಂಕರ ಬರಗಾಲ ಬಿದ್ದದ್ದು ನನಗಿನ್ನು ಮಸಕು ಮಸಕಾಗಿ ನೆನಪಿದೆ. ನನ್ನ ಕಡೆಯ ತಂಗಿ ಹುಟ್ಟಿದ ಮರುವರ್ಷವೇ ಆ ಬರದ ಸಂಕಟವನ್ನು ಅನುಭವಿಸಿದ್ದರಿಂದ ನಾನು ಯಾವಾಗಲೂ ನನ್ನ ತಂಗಿಯನ್ನ ಬರಗಾಲದಾಗ ಹುಟ್ಟಿದಾಕಿ ಅಂತ ಆಡಿಕೊಳ್ಳುತ್ತಿದ್ದ ಕಾರಣಕ್ಕೋ ಏನೋ ಆ ಬರಗಾಲ ನಿಚ್ಚಳ ನೆನಪಿದೆ. ಬಿಕೋ ಅನ್ನುವ ರಣಬಿಸಿಲಿನ ಜಳಕ್ಕ ತತ್ತರಿಸಿ ಹೋದ ದನಕರುಗಳಿಗೆ ಟ್ರಕ್ಕನ್ಯಾಗ ಹುಲ್ಲು ಬರೂತಲೆ ಪಾಳೆಕ್ಕ ನಿಂತು ಹುಲ್ಲು ಬೇಡುತ್ತಿದ್ದ ಮಂದಿಯ ಹಪಹಪಿ ಕಣ್ಣಾಗ ಮೂಡಿದ ಗೊಂಬ್ಯಾಗಿ ಉಳದದ. ಊರ ಜನಗಳು ಕೊಡೋ ಆಯಾ ನಂಬಿ ಬದುಕೋ ನಮ್ಮಂಥ ಸಣ್ಣ ಸಮುದಾಯಗಳಿಗಂತೂ ಬರಗಾಲ ಮೈಮುಳ್ಳಿನ್ಹಂಗ ಚುಚ್ಚತಿರತದ ಅನ್ನೋದು ಸುಳ್ಳಲ್ಲ. ಉಳ್ಳವರು ಗುಳೆ ಹೋಗೋ ಹೊತ್ತಿನ್ಯಾಗ ನಮ್ಮ ಕಸುಬಿಗೆ ಕವಡೆ ಕಿಮ್ಮತ್ತು ಇರತಿರಲಿಲ್ಲ. ನನ್ನಪ್ಪನ ಮುಖದ ಮ್ಯಾಲ ಇದ್ದಕ್ಕಿದ್ದಂತೆ ವಯಸ್ಸಿನ ನೆರಿಗೆಗಳು ಮೂಡಿ ಒಂಥರಾ ದೈನೇಸಿ ಮೂತಿ ಇಟ್ಟಕೊಂಡು ತನ್ನ ಹಸುಬೆ ಸಾಮಾನು ಕಟ್ಟಿಟ್ಟು ‘ನಾವೂ ಎಲ್ಲಿಗಾದರೂ ದೂರ ದುಡಿಲಿಕ್ಕ ಹೋಗೂಣೇನು?’ ಅಂದಾಗ ಅಂತೂ ಕೈಕಾಲು ತಣ್ಣಗಾಗತಿದ್ದವು. ನಮ್ಮಪ್ಪ ಸಣಕಲು ಪೀಚಲು ಮನಶ್ಯಾ… ಖರೆ ಅಂದ್ರ ಅವ ಸಣ್ಣಂದಿರತ ದುಡಿದವನಲ್ಲ. ನಮ್ಮವ್ವನ ದುಡಿಮೆ ನಾವು ಆರು ಜನ ಎಳಸಲು ಪಳಸಲು ಹುಡುಗೋರನ್ನ ಕಟ್ಕೊಂಡು ದುಡಿಯಾಕ ಹೋಗುದಾದರೂ ಎಲ್ಲಿಗೆ ಅನ್ನೋದು ಅವ್ವನ ಪ್ರಶ್ನೆ ಆಗಿತ್ತು. ಕೆರೆಗೆ ತೂಬೂ ಕಟ್ಟುವ ಬರಗಾಲದ ಕಾಮಗಾರಿ ಸುರುವಾದ ಮ್ಯಾಲಂತೂ ಅಪ್ಪನ ಮೂತಿ ನೋಡಲಿಕ್ಕ ಆಗತಿರಲಿಲ್ಲ.
ಆಗ, ನಮಗ ಖರೇ ಹೊಟ್ಟಿ ಎರಡರಷ್ಟಾಗಿಬಿಟ್ಟಿತ್ತು. ನಾವು ನಾಲ್ಕೂ ಜನ ಒಂದು ಆಕಳದ ನೆಪ ಹೇಳಿಕೊಂಡು ಗೋಶಾಲೆಯೊಳಗ ಊಟ ಹೊಡದು ಬರತಿದ್ದಿವಿ, ಟ್ರಕ್ಕ ಬಂದು ನಿಂತಾಗ ರೇಷನ್ನ್ ಸಲುವಾಗಿ ಆಜೂಬಾಜೂಕಿನವರ ಕೂಡ ಕಿತ್ತಾಡತಿದ್ದಿವಿ. ನಮ್ಮನ್ನ ಜಗಳಗಂಟರು ಅಂತ ಗುರುತಿಸುತ್ತಿದ್ದ ಊರ ಜನ ಕೆರೆ ಕಾಮಗಾರಿ ಮಾಡಿ ದಣಿದು ಬರುವ ನಮ್ಮಪ್ಪನ ಮುಂದೆ ಒಂದಿಲ್ಲೊಂದು ತಕರಾರು ಹೇಳಿ ಹೊಡೆಸುತ್ತಿದ್ದರು. ಒಂದೊಂದು ದಿನ ಪಾಳೆಕ್ಕ ನಿಂತು ಊಟ ಹಾಕಿಸಿಕೊಳ್ಳುವಾಗ ದೊಡ್ಡವರೆಲ್ಲ ನಮ್ಮನ್ನ ತಳ್ಳಿ ಹಿಂದು ಹಾಕಿದರು. ಅಪ್ಪನ ಆಜ್ಞಾ ಪ್ರಕಾರ ನಾವು ಸಂಭಾವಿತರಾಗಿಯೇ ಇರಬೇಕಾಗಿತ್ತು. ಹಸಿದ ನನ್ನ ತಂಗಿ ಮುಖ ಈಟೇ ಈಟಾಗಿ ಅಳು ತುಂಬಿಕೊಂಡಿತ್ತು. ಅಣ್ಣ ಹಾಗೂ ಹೀಗೂ ಕಷ್ಟಪಟ್ಟು ತಟಕು ಅನ್ನಸಾರು ಬಿಡಿಸಿಕೊಂಡದ್ದು ಯಾವ ಮೂಲೆಗೂ ಸಾಕಾಗಿರಲಿಲ್ಲ. ಆ ಇಡೀ ದಿನ ನನ್ನ ತಂಗಿ ಹೊರತುಪಡಿಸಿ ನಾವು ಮೂವರು ನೀರುಂಡು ದಿನಗಳೆದೆವು. ಬೇಲಿಯೊಳಗಿನ ಅಸ್ಪೃಶ್ಯರು ನಾವು ನಮಗೆ ಏನು ತಿಂದ್ರಿ ? ಹೊಟ್ಟೆ ಬಟ್ಟೆ ಹೇಗೆ ತುಂಬಿಸಿಕೊಳ್ಳುತ್ತೀರಿ ? ನೆರೆ-ಹೊರೆಯವರು ತೋರಿಸೋ ಸಹಕಾರ ಹೇಗಿದೆ ? ಅಂತ ಯಾರೂ ಕೇಳಲಾರರು. ಮಳೆ ಆಗಿ ಬೆಳೆ ಬಂದ ಮೇಲೆ ರೈತನ ಉಪ ಹೊಟ್ಟೆಯಾಗಿರುವ ನಾವು ಬದುಕುವುದು ಆಯಾದ ಕಾಳಿನಿಂದಲೇ…  ಜಾತಿಯಿಂದ ನಾಯಿಂದರಾಗಿರುವ ನಾವು ತಲೆ ಬೋಳಿಸುತ್ತೇವೆ- ಗಡ್ಡ ಕೆರೆದು ಮುಖ ತೊಳೆದು ಸ್ವಚ್ಛ ಮಾಡುತ್ತೇವೆ ಹೊರತು ಊರಿನ ಯಾರ ಮನೆತನವನ್ನೂ ಹಾಳು ಮಾಡುವವರಲ್ಲ ಆದರೂ ಕೆತಗ ಅನ್ನುವ ಅವಮಾನ ಅನುಭವಿಸುತ್ತೇವೆ.
ನಮ್ಮೂರಾಗ ಮುಂಜಾನೆದ್ದು ನಾವು ಯಾರಿಗೂ ಮುಖ ತೋರಸೋ ಹಂಗಿಲ್ಲ. ಮುಖ ನೋಡುತಲೇ ಅವಮಾನ ಮಾಡತಿದ್ದರು. ಥೂ ಥೂ ಅಂತ ಉಗಳತಿದ್ದರು. ‘ಮುಂಜಾನೆದ್ದ ಈ ಹಜಾಮ ಮೂತಿ ತೋರಿಸಿದ ಏನು ಸುಖಾ ಇಲ್ಲ ತಗಿ’ ಅಂತ ಮಾರಿಗೆ ಹೊಡದಂಗ ಹೇಳತಿದ್ದರು. ರಾತ್ರಿ ಆಗೂತಲೆ ನಾವು ಮುಖ ತೋರಸಬಾರದು, ದಾರಿಗೆ ಎದರಾಗಬಾರದು ಅನ್ನೋ ವಿಚಿತ್ರ ನಡವಳಿಕೆ ನನಗಂತೂ ಮುಜುಗರ ಹುಟ್ಟಸತಿತ್ತು. ಆದರ ಒಂದು ಮಜಾ ಏನು ಅಂದ್ರ ಹಾಗೆ ಥೂ ಅಂತ ಹಚಾಗುಟ್ಟತಿದ್ದವರು ಯಾರೂ ಗಂಡಸರಲ್ಲ, ಹೆಂಗಸರು. ಕೆಲವು ಕಡೆ ಗಂಡಸರು ಹಂಗ ಮಾಡತಿದ್ದರು. ಆದರ ಅವರಿಗೆಲ್ಲ ನಮ್ಮಪ್ಪನ ಕೈಯೊಳಗಿನ ಕತ್ತಿ,ಕತ್ರಿ ಎಂಬ ನಮ್ಮ ಮನೆತನದ ಆಯುಧಗಳ ಬಗ್ಗೆ ಹೆದರಿಕೆ ಇತ್ತು. ಆ ಉಚ್ಚ ಜಾತಿಯವರೆಲ್ಲ ನಮ್ಮಪ್ಪನ ಮುಂದ ತಲೆತಗ್ಗಿಸಿ ಕುಳಿತಾಗ ನನಗಂತೂ ಹೆಮ್ಮೆ ಅನ್ನಿಸತಿತ್ತು. ನಮ್ಮಪ್ಪ ಖುದ್ದ ಬಿಜ್ಜಳರಾಯನೇ ಆಗಿರತಿದ್ದ. 
          ---- ಮಹದೇವ ಹಡಪದ.

ಗುರುವಾರ, ಏಪ್ರಿಲ್ 12, 2012





PUPPET HOUSE(ಗೊಂಬೆಮನೆ) 


Our Workshop Photographs

Childrens are involving in Craft work

Childrens are making puppets in waste materials

Clay modeling

Childrens are performing a play 'Tempest'

Costume Designing

Chidrens are doing Mural

JSS college Dharad students performing a play Andhayuga

Gajanan Mahale conducting Make-up class for Govt Teachers

National Residential school Shimoga  childrens performing a drama

Performing a play by SJMVS  Womens College Hubli

Puppet performance by Childrens


Pupptry workshop

Semi Profession activity - Swapnadarshana Drama

Students are involving makeup

Puppetry workshop to D.Ed Students

Puppetry making, clay modeling

Study materials models for childrens

ಸೋಮವಾರ, ಏಪ್ರಿಲ್ 9, 2012


ಸಾಂಸ್ಕೃತಿಕ ರಾಯಭಾರಿ ಕರ್ನಾಟಕದ ಗಡಿಭಾಗ ಕೊಳ್ಳೇಗಾಲ ಭಾಗದ ಜನರ ಮನೆಯ ಆರಾಧ್ಯ ದೈವ ಮಂಟೇಸ್ವಾಮಿ ಕುರಿತ ಕಾವ್ಯ, ಅದು ಹೊಂದಿರುವ ಒಳ್ಪು ಇಂದಿಗೂ ಪ್ರಸ್ತುತ. ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಮಂಟೇಸ್ವಾಮಿ ಕಥಾಪ್ರಸಂಗ ನಾಟಕವು ವಾಸ್ತವ ಬದುಕನ್ನು ಅಕ್ಷರಶಃ ಕನ್ನಡಿಯಂತೆ ಪ್ರತಿಬಿಂಬಿಸಿತು. ಕಾಲ ಬದಲಾದರೂ ಮಾನವನ ಮನೋಭಾವ ಮಿಸುಕಾಡಿಲ್ಲ. ರೂಪ, ಸ್ವರೂಪ ಬೇರೆಯದ್ದು ಅಷ್ಟೆ. ಜನರ ಢಂಬಾಚಾರವನ್ನು ಪರೀಕ್ಷಿಸಿ, ಬದಲಿಸಲು ಯತ್ನಿಸುವ ಒಂದು ರೂಪವಾಗಿ ಕಾಣುವ ಜಂಗಮಯ್ಯ, ಜನರ ಅಪ್ರಬುದ್ಧತೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾನೆ.
ಮಾನವ ತನ್ನ ಒಳಗಣ್ಣನ್ನು ತೆರೆದು ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವಂತೆ ನಾಟಕವು ಪ್ರತಿ ಹಂತದಲ್ಲೂ ಸೂಚ್ಯವಾಗಿ ಸಲಹೆ ನೀಡುತ್ತಾ ಹೋಗುತ್ತದೆ. ರಂಗಮಂಟಪದಲ್ಲಿ ಜಂಗಮಯ್ಯನ ಆರ್ಭಟವಂತೂ ಧಾರ್ಮಿಕ ಅಂಧಕಾರದಲ್ಲಿ ಮುಳುಗಿದವರನ್ನು ಬಡಿದೆಬ್ಬಿಸುತ್ತದೆ. ವಯೋವೃದ್ಧನೂ, ಜ್ಞಾನವೃದ್ಧನೂ ಆದ ಜಂಗಮಯ್ಯನು ವೇದಿಕೆಯ ಅಷ್ಟೂ ದಿಕ್ಕುಗಳಲ್ಲಿ ತನ್ನ ಪಾರಮ್ಯ ಮೆರೆಯುತ್ತಾನೆ. ಅವನ ಕುಣಿತ, ನೆಗೆತ, ಆರ್ಭಟ, ಕೂಗಾಟ ಪ್ರೇಕ್ಷಕರನ್ನು ಸ್ಥಂಭೀಭೂತರನ್ನಾಗಿ ಮಾಡುತ್ತದೆ.
ನಾಟಕಕ್ಕೆ ಒಂದು ಚೌಕಟ್ಟು ಹಾಗೂ ತನ್ಮಯತೆ ಮೂಡಿಸಿದ್ದು ಹಿನ್ನೆಲೆ ಗಾಯನ. ಜನಪದ ಗೀತೆಗಳನ್ನು ನಾಟಕಕ್ಕೆ ಅಳವಡಿಸಿ, ಮನದುಂಬಿ ಹಾಡಿ, ಏಕತಾನತೆಯಿಂದ ಬಹುದೂರು ಸಾಗುವಂತೆ ಮಾಡುತ್ತದೆ. ಆ ಗೀತೆಗಳಲ್ಲಿರುವ ಲಾಲಿತ್ಯ ಎಂಥವರನ್ನೂ ತಲೆದೂಗಿಸಿತು. ಪ್ರತಿನಿತ್ಯದ ಗೊಂದಲಗಳಿಂದ ಕೊಂಚ ಬಿಡುಗಡೆ ನೀಡಿ, ಮನವನ್ನು ಮುದಗೊಳಿಸಿದ್ದು ಎಲ್ಲ ಸಹೃದಯರ ಮೊಗದಲ್ಲೂ ಎದ್ದು ಕಾಣುತ್ತಿತ್ತು. ಮಂಟೇಸ್ವಾಮಿ ಕಥಾಪ್ರಸಂಗವು ಸಾಂಸ್ಕೃತಿಕ ರಾಯಭಾರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.

ಭಾನುವಾರ, ಏಪ್ರಿಲ್ 8, 2012

……ದ ಎಚ್ಚರಿಕೆ

ಅಂದೂ ನೀ ಮಲಗಿದ್ದೆ
ಇಂದೂ ನೀ ಮಲಗಿದ್ದೀ….
ಆದರೆಂದೆಂದೂ ಎಚ್ಚರವಾಗಿದ್ದೆ ನಾ…..

ಅಂದೂ ಬೀಜವಾಗಿದ್ದೆ ನಾ ಮೊಳಕೆಯೊಡದಿದ್ದೆ,
ಇಂದು ಬಲಿತ ಮರವಾಗಿದ್ದೀ..ನಾ ಹೆಮ್ಮರವಾಗಿದ್ದೇನೆ
ಅಂದು ನಾ ತೋರಿದ ಎಚ್ಚತ್ತ ಜಗತ್ತನ್ನು ನೀ ಅಚ್ಚರಿಯಿಂದ ನೋಡಿದೆ….
ಆ ಅಚ್ಚರಿಯ ಎಚ್ಚರಿಕೆಯ ಮರೆತುಬಿಟ್ಟೆ
ಆದರೆಂದೆಂದೂ ನಾ ಎಚ್ಚರವಾಗಿದ್ದೆ….

ಆದಿಯಿಂದ
ದಿನದಿನವೂ
ಮೊದ್ದುತನದ ಬುದ್ದಿಯಲಿ
ಮರೆತಂತೆ ರೂಢಿಸಿಕೊಂಡುಬಿಟ್ಟೆ.
ಆದರೆಂದೆಂದೂ ನಾ ಎಚ್ಚರವಾಗಿದ್ದೆ….

ಮಾತಾ ಮಮತೆಯಲಿ, ಗುರುವಿನ ಸಜಾ-ರುಜುವಿನಲಿ
ಪಿತನ ವಾತ್ಸಲ್ಯದಲಿ, ಒಡಹುಟ್ಟಿನ ೊಗ್ಗೂಡದ ಜಗಳದಲಿ
ಗೆಳೆತನದ ಒಳಿತಿನಲಿ, ಸಂಬಂಧಗಳ ಬೆಂಬಲದಲಿ
ಶತೃವಿನ ವೈರತ್ವದಲಿ, ಟೀಕಾಸ್ತ್ರ ಕಿಟಕಿಟಿಯಲಿ
ಒಟ್ಟಿನಲಿ
ನಿನ್ನೆಲ್ಲ ರಂಗದ ಬರಿದಾಗದರಿಯುವ ಜಲದಲಿ

ನಾ ಎಚ್ಚರಿಸಿದೆ….
ನಿನ್ನ ಹುಚ್ಚುತನದಲಿ ಎಚ್ಚರಿಕೆಯ ಮರೆತುಬಿಟ್ಟೆ
ಆದರೆಂದೆಂದೂ ನಾ ಎಚ್ಚರವಾಗಿದ್ದೆ……

ಶಾಸ್ತ್ರ ಸೂಕ್ಷ್ಮತೆಯ
ನಿರ್ಬಂಧ ಧರ್ಮದಲಿ
ನೀತಿಯ ನೀಳ್ಗತೆ.
ಸಂಪ್ರದಾಯಾಚಾರ-ವೇದೋಪನಿ ಸಿದ್ಧಾಂತ- ಆಠಪಾಠೋಪಕೂಟಗಳ
ಪೌರ ಪಾಶ್ಚಾತ್ಯ ಕಾವ್ಯ ಸಾಹಿತ್ಯ ಸಾರದ ಬದುವಿನಲ್ಲೂ ಎಚ್ಚರಿಸಿದೆ
ನೀನೋ! ಅತ್ತಿತ್ತ ಸುತ್ತಮುತ್ತಲ ಅರಗಿಸಿಕೊಳ್ಳದ ಗತ್ತಿನಲಿ ಚಿತ್ತವನ್ನಿಟ್ಟಿದ್ದೆ.
ಆದರೆಂದೆಂದೂ ನಾ ಎಚ್ಚರವಾಗಿದ್ದೆ… ನಿನ್ನನೆಚ್ಚರಿಸುತ್ತದ್ದೆ.

ಇಂದು ನಿಸ್ಚಲನಾಗಿದ್ದೇನೆ
ಅಚ್ಚರಿಯ ಹುಚ್ಚುತನದ ಮತಿ ನಿನ್ನ ಕೈ ಬಿಟ್ಟಾಗಿದೆ
ತಪ್ಪೇ ನಿನ್ನಪ್ಪಿಕೊಂಡು ಪಪ್ಪಿ ಕೊಡುತ್ತಿದೆ.
ಈಗ ನೀ ತಪ್ಪಿನ ಮಬ್ಬಿನ ಕರಾಳ ಕೂಪದಲ್ಲಿದ್ದೀ..!
ಕುಲುಮೆಯಲ್ಲಿ ಅದ್ದಿ ಹದವಾಗಿ ತಿದ್ದಿ
ಮೊದ್ದಿನ ಬುದ್ದಿಯ ಗುದ್ದೆಬ್ಬಿಸುವೆ ನಾ…

:ಸರ್ವ ಜಗತ್ತ ಸೃಷ್ಟಿಯ ಕಾರ್ಯ ಕಾರಣಕರ್ತ….:
                             ------ನವೀನ ಮಂ

ಗುರುವಾರ, ಏಪ್ರಿಲ್ 5, 2012

ಪಿ.ಮಹ್ಮದ್ ಅಚರ ಕಚಗುಳಿಯ ಕೆಲ ಚಿತ್ರಗಳು

       ಅದೇನು ಮಜವಾದ ಚಿತ್ರಗಳು ಇವು. ಈ ಫೇಸಬುಕ್ಕಿನ ಪರದೆ ಮೇಲೆ ಯಾವದೋ ಫೋಟೋಕ್ಕೆ ಇನ್ನ್ಯಾವದೋ ರಾಜಕಾರಣವನ್ನೋ, ಕೆಟ್ಟಘಟನೆಯನ್ನೋ ಹೊಂದಿಸಿ ಬರೆಯುವ ಕಿಲಾಡಿಗಳ ಬರಹಕ್ಕಿಂತ ಈ ಚಿತ್ರಗಳು ಅದೆಂಥ ತಾಕತ್ತನ್ನ ಹೊಂದಿವೆ ಅಲ್ಲವಾ ಪಿ ಮಹ್ಮದ್ ಅವರ ಚಿತ್ರಗಳು ಅಂದ್ರೆ ಖುಷಿ ಎಷ್ಟೋ ಸಲ ಪೇಪರ್ ನೋಡಲು ಸಮಯ ಇಲ್ಲದಾಗ ಸಹಿತ ಪಿ ಮಹ್ಮದ್ ಅವರ ಕಚಗುಳಿ ನೋಡೋದೇ ಹೋಗೋದಿಲ್ಲ

ಕಾರ್ಟೂನ್


April 05, 2012
ಪಿ. ಮಹಮ್ಮದ್
April 03, 2012
ಪಿ. ಮಹಮ್ಮದ್























April 01, 2012
ಪಿ.ಮಹಮ್ಮದ್
March 29, 2012
ಪಿ. ಮಹಮ್ಮದ್
















ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...