ಭಾನುವಾರ, ಏಪ್ರಿಲ್ 8, 2012

……ದ ಎಚ್ಚರಿಕೆ

ಅಂದೂ ನೀ ಮಲಗಿದ್ದೆ
ಇಂದೂ ನೀ ಮಲಗಿದ್ದೀ….
ಆದರೆಂದೆಂದೂ ಎಚ್ಚರವಾಗಿದ್ದೆ ನಾ…..

ಅಂದೂ ಬೀಜವಾಗಿದ್ದೆ ನಾ ಮೊಳಕೆಯೊಡದಿದ್ದೆ,
ಇಂದು ಬಲಿತ ಮರವಾಗಿದ್ದೀ..ನಾ ಹೆಮ್ಮರವಾಗಿದ್ದೇನೆ
ಅಂದು ನಾ ತೋರಿದ ಎಚ್ಚತ್ತ ಜಗತ್ತನ್ನು ನೀ ಅಚ್ಚರಿಯಿಂದ ನೋಡಿದೆ….
ಆ ಅಚ್ಚರಿಯ ಎಚ್ಚರಿಕೆಯ ಮರೆತುಬಿಟ್ಟೆ
ಆದರೆಂದೆಂದೂ ನಾ ಎಚ್ಚರವಾಗಿದ್ದೆ….

ಆದಿಯಿಂದ
ದಿನದಿನವೂ
ಮೊದ್ದುತನದ ಬುದ್ದಿಯಲಿ
ಮರೆತಂತೆ ರೂಢಿಸಿಕೊಂಡುಬಿಟ್ಟೆ.
ಆದರೆಂದೆಂದೂ ನಾ ಎಚ್ಚರವಾಗಿದ್ದೆ….

ಮಾತಾ ಮಮತೆಯಲಿ, ಗುರುವಿನ ಸಜಾ-ರುಜುವಿನಲಿ
ಪಿತನ ವಾತ್ಸಲ್ಯದಲಿ, ಒಡಹುಟ್ಟಿನ ೊಗ್ಗೂಡದ ಜಗಳದಲಿ
ಗೆಳೆತನದ ಒಳಿತಿನಲಿ, ಸಂಬಂಧಗಳ ಬೆಂಬಲದಲಿ
ಶತೃವಿನ ವೈರತ್ವದಲಿ, ಟೀಕಾಸ್ತ್ರ ಕಿಟಕಿಟಿಯಲಿ
ಒಟ್ಟಿನಲಿ
ನಿನ್ನೆಲ್ಲ ರಂಗದ ಬರಿದಾಗದರಿಯುವ ಜಲದಲಿ

ನಾ ಎಚ್ಚರಿಸಿದೆ….
ನಿನ್ನ ಹುಚ್ಚುತನದಲಿ ಎಚ್ಚರಿಕೆಯ ಮರೆತುಬಿಟ್ಟೆ
ಆದರೆಂದೆಂದೂ ನಾ ಎಚ್ಚರವಾಗಿದ್ದೆ……

ಶಾಸ್ತ್ರ ಸೂಕ್ಷ್ಮತೆಯ
ನಿರ್ಬಂಧ ಧರ್ಮದಲಿ
ನೀತಿಯ ನೀಳ್ಗತೆ.
ಸಂಪ್ರದಾಯಾಚಾರ-ವೇದೋಪನಿ ಸಿದ್ಧಾಂತ- ಆಠಪಾಠೋಪಕೂಟಗಳ
ಪೌರ ಪಾಶ್ಚಾತ್ಯ ಕಾವ್ಯ ಸಾಹಿತ್ಯ ಸಾರದ ಬದುವಿನಲ್ಲೂ ಎಚ್ಚರಿಸಿದೆ
ನೀನೋ! ಅತ್ತಿತ್ತ ಸುತ್ತಮುತ್ತಲ ಅರಗಿಸಿಕೊಳ್ಳದ ಗತ್ತಿನಲಿ ಚಿತ್ತವನ್ನಿಟ್ಟಿದ್ದೆ.
ಆದರೆಂದೆಂದೂ ನಾ ಎಚ್ಚರವಾಗಿದ್ದೆ… ನಿನ್ನನೆಚ್ಚರಿಸುತ್ತದ್ದೆ.

ಇಂದು ನಿಸ್ಚಲನಾಗಿದ್ದೇನೆ
ಅಚ್ಚರಿಯ ಹುಚ್ಚುತನದ ಮತಿ ನಿನ್ನ ಕೈ ಬಿಟ್ಟಾಗಿದೆ
ತಪ್ಪೇ ನಿನ್ನಪ್ಪಿಕೊಂಡು ಪಪ್ಪಿ ಕೊಡುತ್ತಿದೆ.
ಈಗ ನೀ ತಪ್ಪಿನ ಮಬ್ಬಿನ ಕರಾಳ ಕೂಪದಲ್ಲಿದ್ದೀ..!
ಕುಲುಮೆಯಲ್ಲಿ ಅದ್ದಿ ಹದವಾಗಿ ತಿದ್ದಿ
ಮೊದ್ದಿನ ಬುದ್ದಿಯ ಗುದ್ದೆಬ್ಬಿಸುವೆ ನಾ…

:ಸರ್ವ ಜಗತ್ತ ಸೃಷ್ಟಿಯ ಕಾರ್ಯ ಕಾರಣಕರ್ತ….:
                             ------ನವೀನ ಮಂ

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...