ವರಸೆ
ಈ ನರಕ ಈ ಪುಳಕ
ಗೆರೆ ಬರೆದುಕೊಂಡು ಕುಳಿತವ
ಆಚೀಚೆ ಕಣ್ಣಾಡಿಸಿ ಸೋತು ಸುಣ್ಣ ಆದಾನು
ಲೋಕವೆಲ್ಲ ಹಳದಿ,
ಬೇಸರದಿಂದ ಗಡಿಯ ತೊರೆದು
ನಿಟ್ಟುಸಿರಗರೆದು ಅಂತರ್ ಪಿಶಾಚಿ ಆದಾನು
ಬಂಡುಂಬ ಚಿಂತೆ ಯಾರ ಸೊತ್ತೂ ಅಲ್ಲ
ಧಾಟಿ ತಿಳಿದು ಹಾಡಿದರೆ ಗಾಯನ
ಹಾದಿ ಬಿಟ್ಟು ನಡೆದರೆ ಆಹಾ!
ಅದೆಂಥ ಸೊಕ್ಕು
ತಾನೇ ಸರ್ವಸ್ವ
ತಾನೇ ಶಿವ
ಅಹಂ ಬ್ರಹ್ಮಾಸ್ಮಿ
ಒಣ ಆಧ್ಯಾತ್ಮ ವಗರು
ಅರೆ ಬೆಂದ ಮಡಕೆಗೆ ಆದಿ ಅಂತ್ಯ ಎರಡು ಒಂದೇ.
---ಮಹಾದೇವ ಹಡಪದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ