ಚಳಿಗಾಲ
ಹಾರುವ ಹಕ್ಕಿಯು ದಿಕ್ಕು ಬದಲಿಸಿ ಚಲಿಸುತ್ತಿದೆ
ಮರ ಗಿಡ ಹಾಯಾಗಿ ಒರಗಿ
ಎಲೆಗಳು ಮುರುಟಿ ಮಲಗಿ
ತಡ ಮಾಡಿ ಎದ್ದಾಗ-
ಉದುರಿ ಬಿದ್ದ ಮೈ ಕಾಂತಿ.
ನೀರ ಮುಟ್ಟಲು ಭಯ, ಕೊರೆವ
ಗಿಡ ಮರ ನೆಲನ ಮುತ್ತಿ ಮಾತಾಡಿಸಲು
ಆಕಾಶದ ಅಂಚು ಬಟ್ಟಂಬಯಲು
ಮೋಡ ಮೇಲೇಳಲು
ಗಡಿ ದಾಟಿ ಹಾರಲು ಯಾರಪ್ಪಣೆ ಆಗಬೇಕು.
ಚಳಿಯ ಸೋಂಬೇರಿತನ ಚಾದರ
ಹೊತ್ತು, ಗೂಡಗಾಲಲ್ಲಿ ಮುಖ ಮುದುಡಿ
ಬೆಚ್ಚಗಿರಲು ಎಳೀ ಸೂರ್ಯ ಈಗ ಮಿಟುಕಲಾಡಿ
ವಿಪರೀತ ಕಣ್ಣ ಸೋಗಿನ ಹಾವಳಿ
mahadev hadapad 9972352163
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ