ಯುಗಾದಿ ಬರುವುದೇ ಹಬ್ಬ ಹರಿದಿನಗಳ ಮುನ್ಸೂಚನೆಯಾಗಿ ಅಂತ ಗೊತ್ತಿತ್ತು. ಹಾಗಾಗಿ ಯುಗಾದಿ ಶಾಲೆಯ ಫಜೀತಿಯಿಂದ ನಮ್ಮನ್ನು ಬಿಡುಗಡೆಗೊಳಿಸಿ ಎರಡು ತಿಂಗಳ ಕಾಲ ಕಲ್ಲು, ಮಣ್ಣು, ಮುಳ್ಳು, ಕಂಟಿ-ಗಿಡಗಂಟೆ, ಹಳ್ಳ, ಗುಡ್ಡ ಹೀಗೆ ಸೀಮೆ ಸುತ್ತಲು ಅವಕಾಶ ಮಾಡಿಕೊಡುತ್ತಿದ್ದ ಕಾರಣಕ್ಕೆ ಸಣ್ಣವರಾಗಿದ್ದ ನಮಗೆ ಯುಗಾದಿ ಬಂದದ್ದು ಹೋಗಲೇಬಾರದು ಎನಿಸುತ್ತಿತ್ತು. ನಮ್ಮೂರಲ್ಲಿ ಆ ಹೊತ್ತಿಗೊಂದು ಜಾತ್ರೆ ಆಗುವುದರಿಂದಾಗಿ ಅದು ನಮ್ಮೂರಿನ ಜನರ ಮಾನಸಿಕ ಸ್ತಿತಿಯನ್ನೆ ಬದಲಾಯಿಸಿ ಬಿಡುವ ಮತ್ತು ನಮ್ಮ ಪರೀಕ್ಷೆಗಳಿಗೆಲ್ಲ ವಿದಾಯ ಹೇಳಲು ವರ್ಷಕ್ಕೊಮ್ಮೆ ಬರುತ್ತದೆಂಬುದು ನಮ್ಮ ತಿಳವಳಿಕೆ ಆಗಿತ್ತು. ಅಪ್ಪ ಅಷ್ಟೋ ಇಷ್ಟು ತಾನು ಉಳಿಸಿದ್ದರಲ್ಲಿ ಬಟ್ಟೆ ತಂದು ನಮಗೆಲ್ಲ ಹೊಸ ಬಟ್ಟೆ ಹೊಲಿಸುತ್ತಿದ್ದ ಕಾರಣಕ್ಕೆ ನಾನು ಆ ಹಬ್ಬಕ್ಕಾಗಿ ವರ್ಷವಿಡೀ ಕಾಯುತ್ತಿದ್ದೆ. ಮನೆಗೆ ಬಂಧು-ಬಾಂಧವ ಆಪ್ತೇಷ್ಟರು ಬರುತ್ತಿದ್ದರಾದ್ದರಿಂದ ನಮ್ಮ ಉಪಟಳಕ್ಕೆ ಬೀಳುತ್ತಿದ್ದ ಕೋಲಿನ ಏಟುಗಳಿಂದ ಸಹ ನಾವು ಬಚಾವ ಆಗಲು ಆ ಹಬ್ಬ ನಮ್ಮ ಸಹಾಯಕ್ಕೆ ನಿಲ್ಲುತ್ತಿತ್ತು. ಈಗ ಮತ್ತೆ ಯುಗಾದಿ ಬಂದಿದೆ ಶಿವಾ ಅಂತ ಮತ್ತೆ ಬಾಲ್ಯ ನೆನಪಾಗುತ್ತಿದೆ.
ಆಟಮಾಟ ಧಾರವಾಡ ನೆಲದಲ್ಲಿ ಒಂದು ನಾಟಕ ತಂಡವಾಗಿ ಹುಟ್ಟಿ. ನಾಟಕ ಮಾಡುತ್ತಾ ಗೆಳೆಯರನ್ನು ಸಂಘಟಿಸುತ್ತಾ ಬಂದಿದೆ
ಶನಿವಾರ, ಮಾರ್ಚ್ 17, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ
ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...
-
ಕರ್ನಾಟಕದಲ್ಲಿ ಬೀದಿ ರಂಗಭೂಮಿಗೆ ಸುದೀರ್ಘ ಮೂವತ್ತು ವರ್ಷಗಳ ಇತಿಹಾಸವಿದೆ. ಚಳುವಳಿ ಮಾದರಿಯಲ್ಲಿ ಆರಂಭಗೊಂಡ ಬೀದಿ ನಾಟಕ ಬಹುದೊಡ್ಡ ಸಾಂಸ್ಕೃ...
-
ಶಶಿಕಾಂತ ಯಡಹಳ್ಳಿ ವಿಮರ್ಶೆ: ಬಲಿದಾನಕುಂಟೆ ಕೊನೆ? September 6, 2013 by G ಕುವೆಂಪುರವರ ‘ಬಲಿದಾನ’ದಲ್ಲಿ ಸಾರ್ವಕಾಲಿಕ ದರ್ಶನ ಶಶಿ...
-
(hasirele.blogspot.com) krupe ನಾಡಿನ ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆಯವರ ಕೊಡುಗೆ ಅಪಾರವಾದದ್ದು. ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ ಮತ್ತು ಸಾಣೆಹ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ