ಕೇಸರಿ ಭಯೋತ್ಪಾದನೆ : ಇನ್ನಷ್ಟು ಬಂಧನ ಸಾಧ್ಯತೆ: ಕೇಂದ್ರ
ಶನಿವಾರ - ಫೆಬ್ರವರಿ -18-2012
ಹೊಸದಿಲ್ಲಿ, ಫೆ.17: ಸಂರೆತಾ ಎಕ್ಸ್‌ಪ್ರೆಸ್ ಸ್ಫೋಟ ಆರೋಪದಲ್ಲಿ ಆರೆಸ್ಸೆಸ್‌ನ ಮಾಜಿ ಕಾರ್ಯಕರ್ತ ಕಮಲ್ ಚೌಹಾಣ್‌ನ ಬಂಧನವಾಗಿರುವಂತೆಯೇ, ಕನಿಷ್ಠ 6 ಭಯೋತ್ಪಾದಕ ದಾಳಿ ಪ್ರಕರಣಗಳನ್ನು ಭೇದಿಸಲು ಇನ್ನಷ್ಟು ಬಂಧನಗಳನ್ನು ನಡೆಸುವ ಸಾಧ್ಯತೆಯಿದೆಯೆಂದು ಕೇಂದ್ರ ಸರಕಾರ ಬಹಿರಂಗಪಡಿಸಿದೆ. ಈ ಪ್ರಕರಣಗಳಲ್ಲಿ ಮಾಲೆಗಾಂವ್, ಮೊಡಸಾ (ಗುಜರಾತ್) ಅಜ್ಮೀರ್ ಹಾಗೂ ಮಕ್ಕಾ ಮಸೀದಿ ಸ್ಫೋಟಗಳು ಸೇರಿವೆಯೆಂದು ಅದು ತಿಳಿಸಿದೆ.
2006ರ ಮಾಲೆಗಾಂವ್ ಸ್ಫೋಟ, 2007ರ ಸಂರೆತಾ ಎಕ್ಸ್‌ಪ್ರೆಸ್ ಸ್ಫೋಟ, ಮಕ್ಕಾ ಮಸೀದಿ ಹಾಗೂ ಅಜ್ಮೀರ್ ದರ್ಗಾ ಸ್ಫೋಟ ಹಾಗೂ 2008ರ ಮಾಲೆಗಾಂವ್ ಹಾಗೂ ಮೋಡಸಾ ಸ್ಫೋಟಗಳ ತನಿಖೆ ನಡೆಸಲಾಗಿದೆ ಅಥವಾ ಹೆಚ್ಚಿನ ತನಿಖೆ ನಡೆಯುತ್ತಿದೆಯೆಂದು ಕೇಂದ್ರ ಗೃಹ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ನಂದಕುಮಾರ್ ಸರ್ಕಾರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ಲೋಕೇಶ್ ಶರ್ಮಾ, ದೇವೇಂದ್ರ ಗುಪ್ತಾ ಮತ್ತು ಇತರ ಕೆಲವರನ್ನು ಬಂಧಿಸಿದೆಯೆಂದು ಅದು ಹೇಳಿದೆ. ಇನ್ನಷ್ಟು ಬಂಧನ ಸಾಧ್ಯತೆ: ಕೇಂದ್ರ
ರವಿವಾರ ಎನ್‌ಐಎ ಬಂಧಿಸಿರುವ ಕಮಲ್ ಚೌಹಾಣ್, ಸಂರೆತಾ ಎಕ್ಸ್‌ಪ್ರೆಸ್ ರೈಲಿನೊಳಗೆ ತಾನೇ ಬಾಂಬ್ ಇರಿಸಿದ್ದುದಾಗಿ ತಿಳಿಸಿದ್ದಾನೆಂದು ಹೇಳಿಕೆ ಪ್ರತಿಪಾದಿಸಿದೆ. ಸ್ಫೋಟದಲ್ಲಿ ಹೆಚ್ಚಿನ ಪಾಕಿಸ್ತಾನಿಯರು ಸೇರಿದಂತೆ ಒಟ್ಟು 68 ಮಂದಿ ಸಾವಿಗೀಡಾಗಿದ್ದರು. ಬಿಜೆಪಿಯು ನಿನ್ನೆ ಕಳೆದ ಎಂಟು ವರ್ಷಗಳಲ್ಲಿ ಯಾವುದೇ ಭಯೋತ್ಪಾದಕ ಪ್ರಕರಣವನ್ನು ಭೇದಿಸಲಾಗಿಲ್ಲವೆಂದು ಹೇಳಿರುವುದಕ್ಕೆ ಉತ್ತರವಾಗಿ ಸರಕಾರದ ಈ ಹೇಳಿಕೆ ಹೊರಟಿದೆ.
ಏಳು ಭಯೋತ್ಪಾದನೆ ಪ್ರಕರಣಗಳು ಇತ್ಯರ್ಥ ಮೇ 20ರಿಂದಿಂದೀಚೆಗಿನ ಪ್ರಮುಖ ಭಯೋತ್ಪಾದಕ ಪ್ರಕರಣಗಳ ವಿವರ ನೀಡಿರುವ ಗೃಹ ಸಚಿವಾಲಯ, ಒಟ್ಟು 46 ಪ್ರಕರಣಗಳು ನಡೆದಿದ್ದು, 7 ಪ್ರಕರಣಗಳ ಹೊರತು ಉಳಿದವುಗಳೆಲ್ಲ ಇತ್ಯರ್ಥವಾಗಿವೆ ಎಂದಿದೆ. 9 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಉಳಿದ 30 ಪ್ರಕರಣಗಳಲ್ಲಿ 29ರಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. 19 ಪ್ರಕರಣಗಳ ವಿಚಾರಣೆ ಆರಂಭವಾಗಿದೆ. 2 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಇತ್ಯರ್ಥವಾಗದ ಬಗ್ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಇತ್ಯರ್ಥವಾಗದ 7 ಪ್ರಕರಣಗಳಲ್ಲಿ 4 ಪ್ರಕರಣಗಳು ಇತ್ಯರ್ಥವಾಗುವ ಸನಿಹದಲ್ಲಿವೆಯೆಂದು ಹೇಳಿಕೆ ವಿವರಿಸಿದೆ.
(varthabharati krupe)